Category Archives: ಶುಭ ಕಾಮನೆಗಳು

‎—-ದೀಪದಿಂದ ದೀಪ ಹಚ್ಚೋಣ—


ಬೆಳಕು ಬೇಕು ಬಾಳಿಗೆ
ತಿಳಿ ಹಾಲಿನ ಹಾಗೆ
ಅಮವಾಸೆಯು ಕೂಡ ಆಗಲಿ ಹುಣ್ಣಿಮೆಯ ಹಾಗೆ

ಅಮಾವಾಸ್ಯೆಯಾ ಕತ್ತಲ
ದೂಡುತಿಹುದು ದೀಪಾವಳಿ
ನಾವೂ ಅಚ್ಚುವ ದೀಪವ
ದೂಡುವ ಅಂಧಕಾರವ

ಪ್ರೀತಿ ಎಂಬ ದೀಪವಿಡಿದು
ಬಾಳ ದಾರಿ ಸಾಗಿಸೋಣ
ಕತ್ತಲಿಂದ ಬೆಳಕಿನೆಡೆಗೆ
ನೆಮ್ಮದಿಯ ಗೂಡ ಕಡೆಗೆ

ಮನದ ಅಂಧಕಾರ ದೂಡಿ
ಒಲವ ಜ್ಯೋತಿ ಅಂಟಿಸುತ್ತಾ
ಸಾಗಲಿ ಬಾಳ ಬಂಡಿ
ಜ್ಞಾನದ ಬೀಡಿನಲ್ಲಿ

ಪಟಾಕಿಯ ಹಾವಳಿ ಮಾಡಿ
ಪರಿಸರಕ್ಕೆ ಹಾನಿ ಮಾಡಿ
ಸಂಭ್ರಮಿಸುವ ಆಚರಣೆ ಬೇಡ
ಆಡಂಬರದ ಸೋಗು ಬೇಡ

ದೀಪಗಳ ಹಾವಳಿ ಸಾಕು
ಬರಲಿ ಮನ-ಮನೆಗಳಿಗೆ ಬೆಳಕು
ಹೊಗೆಯ ತಳುಕು
ಯಾಕೆ ಬೇಕು..

ಹಚ್ಚೋಣ ದೀಪ
ಕಳೆದುಕೊಳ್ಳೋಣ ಪಾಪ

ಮನವೆಂಬ ದೀಪಕೆ
ಒಲವೆಂಬ ಎಣ್ಣೆಯ ತುಂಬಿ
ಜ್ಞಾನದ ಬೆಂಕಿ ಅಚ್ಚಿ
ಅಜ್ಞಾನದ ಅಂಧಕಾರವ ತೊಲಗಿಸೋಣ

ಎಲ್ಲರಿಗೂ ಶುಭ ತರಲಿ ಬೆಳಕಿನ ಹಬ್ಬ ದೀಪಾವಳಿ

ದೀಪಾವಳಿಯ ಶುಭಾಶಯಗಳು..

ನಿಮ್ಮ ಟಿಪ್ಪಣಿ ಬರೆಯಿರಿ

Filed under ಶುಭ ಕಾಮನೆಗಳು

ದೀಪಾವಳಿ


ಭವಿಷ್ಯೋತ್ತರ ಪುರಾಣದಲ್ಲಿ (140-71) ಹೇಳಿರುವ ಉಕ್ತಿ ಹೀಗಿದೆ

ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ||

ರಾಮಾಯಣದಲ್ಲಿ ಮೇಘನಾಥನು (ಇಂದ್ರಜಿತು) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವ ದಿನವು ನಮ್ಮ ಹಾಗೂ ನಿಮ್ಮ ಪಾಪಗಳನ್ನು ಹೋಗಲಾಡಿಸಲಿ.

ನಮ್ಮ ದೇಶದಲ್ಲಿ ಅಲ್ಲದೇ ಅಕ್ಕ ಪಕ್ಕದ ದೇಶಗಳಲ್ಲೆಲ್ಲಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಕೆಲವೇ ಹಬ್ಬಗಳಲ್ಲಿ, ದೀಪಾವಳಿಯೂ ಮುಖ್ಯವಾದುದು. ಇದನ್ನು ನಾಡಹಬ್ಬವಾಗಿಯೂ ಆಚರಿಸುವ ಸಂಪ್ರದಾಯವುಂಟು.

ದೀಪಗಳ ಆವಳಿ – ಸರಮಾಲೆ – ದೀಪಗಳ ಸಾಲು ಎಂದರ್ಥ. ಕಾರ್ತಿಕ ಮಾಸದ ಕಡೆಯಲ್ಲಿ ಮನೆ ಮಂದಿರಗಳಲ್ಲಿ ಕಾರ್ತೀಕ ದೀಪೋತ್ಸವ, ಶಿವ ದೀಪೋತ್ಸವ ಮತ್ತು ವಿಷ್ಣು ದೀಪೋತ್ಸವಗಳೆಂದು ಕರೆದು ಎಲ್ಲೆಡೆ ದೀಪಗಳನ್ನು ಸಾಲು ಸಾಲಾಗಿ ಹಚ್ಚಿಡುವರು. ಮುಂದೆ ಕಾರ್ತೀಕ ದೀಪೋತ್ಸವದಲ್ಲಿ ದೀಪಗಳನ್ನು ಬೆಳಗಿಸುವ ಸಮಾರಂಭಕ್ಕೆ ದೀಪಾವಳಿಯು ನಾಂದಿಯಾಗಿರುತ್ತದೆ. ದೀಪಾವಳಿ ಉತ್ಸವದಲ್ಲಿ ಮಹಾವಿಷ್ಣುವಿನ ಪೂಜೆ, ನರಕಾಸುರನ ವಧೆ, ಬಲೀಂದ್ರ ವಿಜಯದ ಪೂಜೆ, ಮಹಾಲಕ್ಷ್ಮಿಯ ಪೂಜೆ, ಮಹಾದೇವನ ಪೂಜೆ, ಮಹಾರಾತ್ರಿಯ ಪೂಜೆ, ಕುಬೇರನ ಪೂಜೆ, ಯಮಧರ್ಮರಾಜನ ಪೂಜೆ, ಗೋವಿನ ಪೂಜೆ ಮತ್ತು ಗೋವರ್ಧನ ಪೂಜೆಗಳನ್ನೂ ಮಾಡುವರು. ಈ ಸಮಯದಲ್ಲಿ ಪಶು ಪ್ರಾಣಿಗಳಿಗೂ ಪೂಜೆಯಲ್ಲಿ ಆದ್ಯತೆ ನೀಡಲಾಗುವುದು. ಇಷ್ಟಲ್ಲದೇ ಇದೇ ಸಮಯದಲ್ಲಿ ದೀಪದಾನವನ್ನೂ ನಡೆಸುವರು. ಇಷ್ಟಲ್ಲದೇ ವಿಶೇಷ ದಿನಗಳಲ್ಲಿ ಆಯಾ ಪ್ರಾಂತ್ಯಗಳಲ್ಲಿ ಆಚರಣೆಯಲ್ಲಿರುವ ಕೌಮುದೀ ಮಹೋತ್ಸವ, ನರಕ ಚತುರ್ದಶೀ, ಬಲಿಪಾಡ್ಯಮಿ, ವೀರಪ್ರತಿಪದಾ, ಭಗಿನೀ ದ್ವಿತೀಯಾ (ಬಿಹಾರ ಉತ್ತರ ಪ್ರದೇಶಗಳಲ್ಲಿ ಭಾವುದೂಜ್), ಸೋದರ ಬಿದಿಗೆ (ಮಹಾರಾಷ್ಟ್ರದಲ್ಲಿ ಭಾವುಬೀಜ್) ಇತ್ಯಾದಿ ಹಬ್ಬಗಳನ್ನು ಆಚರಿಸುವರು.

ಆಶ್ವಯುಜ ಮಾಸ ಕೃಷ್ಣ ಪಕ್ಷದ ತ್ರಯೋದಶಿಯ ಸಂಜೆ ಶುದ್ಧವಾದ ನೀರನ್ನು ಮನೆಯ ಎಲ್ಲ ಪಾತ್ರೆಗಳಿಗೂ ಸ್ನಾನಕ್ಕಾಗಿಯೂ ತುಂಬಿಟ್ಟು, ರಾತ್ರಿ ಸಮಯದಲ್ಲಿ ಅಪಮೃತ್ಯ ನಿವಾರಣೆಗಾಗಿ ಯಮಧರ್ಮರಾಜನನ್ನು ಸಂತೋಷಪಡಿಸಲು ಮನೆಯ ಹೊರಗಡೆ ದೀಪವನ್ನು ಹೊತ್ತಿಸಿಡುವರು. ಇದಕ್ಕೆ ಯಮದೀಪ ಎಂದು ಹೆಸರಿಸುವರು. ಮೃತ್ಯುವಿನಿಂದಲೂ, ಪಾಶದಂಡಗಳಿಂದಲೂ, ಕಾಲಪುರುಷನಿಂದಲೂ ಮತ್ತು ಶ್ಯಾಮಾದೇವಿಯಿಂದಲೂ ಕೂಡಿದ ಸೂರ್ಯಪುತ್ರ ಯಮಧರ್ಮರಾಜನು ತ್ರಯೋದಶಿಯ ಈ ದೀಪದಾನದಿಂದ ಸಂತುಷ್ಟನಾಗುವನು. ಅಂದಿನ ದಿನವನ್ನು ನೀರು ತುಂಬುವ ಹಬ್ಬವೆಂದೂ ಕರೆವರು. ದಕ್ಷಿಣ ಭಾರತದಲ್ಲಿ ನೀರು ಕಾಯಿಸುವ ಒಲೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, ಕುಂಕುಮಗಳೊಂದಿಗೆ ರಂಗೋಲಿಯನ್ನಿಟ್ಟು ಮಾರನೆಯ ದಿನದ ಅಭ್ಯಂಜನ ಸ್ನಾನಕ್ಕೆ ಅಣಿಗೊಳಿಸುವರು.

ನಿಮ್ಮ ಟಿಪ್ಪಣಿ ಬರೆಯಿರಿ

Filed under ಶುಭ ಕಾಮನೆಗಳು

ದೀಪಾವಳಿ


ಹಚ್ಚಿರೆಲ್ಲೆಡೆಯಲಿ ಎಂದೂ ಆರದ ನಂದಾದೀಪ |
ಹರಡಿರೆಲ್ಲೆಡೆಯಲಿ ಕತ್ತಲ ಕಳೆಯುವ ಬೆಳಕಿನ ದೀಪ ||
ಹಂಚಿರೆಲ್ಲೆಡೆಯಲಿ ಸ್ನೇಹ ಪ್ರೀತಿಗಳ ಒಲವಿನ ದೀಪ|
ಭಗವಂತನಾಗಲಿ ನಿಮ್ಮ ಬದುಕಿಗೆ ಅಭಯ ದೀಪ ||
ತಾನು ನೋವನುಭವಿಸಿ ಬೆಳಕನೀವ ದೀಪವಾಗಲಿ
ನಿಮ್ಮ ವ್ಯಕ್ತಿತ್ವಕೆ ದಾರಿದೀಪ |
ಬೆಳಗುತಿರಲಿ ಸದಾ, ನಿಮ್ಮ ಬಾಳಿನಲಿ ಸುಖ ಶಾಂತಿ ನೆಮ್ಮದಿಗಳ ಆಶಾದೀಪ ||…..

ದೀಪಗಳ ಹಬ್ಬ “ದೀಪಾವಳಿಯ ತುಂಬು ಹೃದಯದ ಹಾರ್ದಿಕ ಶುಭಾಶಯಗಳು

ನಿಮ್ಮ ಟಿಪ್ಪಣಿ ಬರೆಯಿರಿ

Filed under ಶುಭ ಕಾಮನೆಗಳು

ಶುಭಾಶಯಗಳು


ಜಲೇ ವಿಶ್ಣುಃ ಸ್ಥಲೇ ವಿಶ್ಣುಃ ಪರ್ವತಮಸ್ತಕೇ.
ಜ್ವಲೇಮಾಲಾ ಕುಲೇ ವಿಶ್ಣುಃ ಸರ್ವ್ಂ ವಿಶ್ಣು ಮಯಂ ಜಗತ್…
( ಯಾವ ರೂಪವನ್ನು ಪೂಜಿಸಿದರು ಯಾವ ದೇವತೆಗೆ ನಮಸ್ಕಾರ ಮಾಡಿದರೂ,
ಯೆಲ್ಲವೂ ಮುಟ್ಟುವುದು ಒಂದೇ ದೇವರಿಗೆ,,
ಮುಗಿಲಿನಿಂದ ಬಿದ್ದ ಮಳೆ ಕಡೆಗೆ ಹೋಗುವುದೇ ಕಡಲಿಗೆ…ಶುಭದಿನ ..!
ನನ್ನ ಯೆಲ್ಲಾ ಮಿತ್ರರಿಗೂ ಬೆಳಕಿನ ಹಬ್ಬ ದೀಪಾವಳಿ, ಯ ಶುಭಾಶಯಗಳು…!

ನಿಮ್ಮ ಟಿಪ್ಪಣಿ ಬರೆಯಿರಿ

Filed under ಶುಭ ಕಾಮನೆಗಳು

ದೀಪಾವಳಿ


ಈ ದೀಪಾವಳಿಯಲ್ಲಿ ಒಬ್ಬರ ಜೀವನದಲಿ ಸಹಾಯದ ಹಣತೆ ಹಚ್ಚಿ ಅವರ ಬಾಳನ್ನು ಬೆಳಗಿಸಬೇಕೆಂದು ಪ್ರತಿಯೊಬ್ಬರಿಂದ ಕೋರುವೆನು……ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ….
ಹೇ ದೀಪ,
ಈ ದೀಪಾವಳಿಯಲಿ
ನೀ ಮೊದಲು ಹೋಗು
ಕತ್ತಲೆಯಲ್ಲಿದ್ದವರ ಜೀವನದಲಿ
ಸ್ವಲ್ಪ ಪ್ರಕಾಶಿಸು
ಅವರ ಮನೆಯಲಿ
ಬೆಳಕು ಹರಿಸು ಅವರ ಬಾಳಲ್ಲಿ
ಸಂತೋಷದಿಂದ ಅವರೂ ಈ ದೀಪಾವಳಿ ಆಚರಿಸಲಿ

ನಿಮ್ಮ ಟಿಪ್ಪಣಿ ಬರೆಯಿರಿ

Filed under ಶುಭ ಕಾಮನೆಗಳು