‎—-ದೀಪದಿಂದ ದೀಪ ಹಚ್ಚೋಣ—


ಬೆಳಕು ಬೇಕು ಬಾಳಿಗೆ
ತಿಳಿ ಹಾಲಿನ ಹಾಗೆ
ಅಮವಾಸೆಯು ಕೂಡ ಆಗಲಿ ಹುಣ್ಣಿಮೆಯ ಹಾಗೆ

ಅಮಾವಾಸ್ಯೆಯಾ ಕತ್ತಲ
ದೂಡುತಿಹುದು ದೀಪಾವಳಿ
ನಾವೂ ಅಚ್ಚುವ ದೀಪವ
ದೂಡುವ ಅಂಧಕಾರವ

ಪ್ರೀತಿ ಎಂಬ ದೀಪವಿಡಿದು
ಬಾಳ ದಾರಿ ಸಾಗಿಸೋಣ
ಕತ್ತಲಿಂದ ಬೆಳಕಿನೆಡೆಗೆ
ನೆಮ್ಮದಿಯ ಗೂಡ ಕಡೆಗೆ

ಮನದ ಅಂಧಕಾರ ದೂಡಿ
ಒಲವ ಜ್ಯೋತಿ ಅಂಟಿಸುತ್ತಾ
ಸಾಗಲಿ ಬಾಳ ಬಂಡಿ
ಜ್ಞಾನದ ಬೀಡಿನಲ್ಲಿ

ಪಟಾಕಿಯ ಹಾವಳಿ ಮಾಡಿ
ಪರಿಸರಕ್ಕೆ ಹಾನಿ ಮಾಡಿ
ಸಂಭ್ರಮಿಸುವ ಆಚರಣೆ ಬೇಡ
ಆಡಂಬರದ ಸೋಗು ಬೇಡ

ದೀಪಗಳ ಹಾವಳಿ ಸಾಕು
ಬರಲಿ ಮನ-ಮನೆಗಳಿಗೆ ಬೆಳಕು
ಹೊಗೆಯ ತಳುಕು
ಯಾಕೆ ಬೇಕು..

ಹಚ್ಚೋಣ ದೀಪ
ಕಳೆದುಕೊಳ್ಳೋಣ ಪಾಪ

ಮನವೆಂಬ ದೀಪಕೆ
ಒಲವೆಂಬ ಎಣ್ಣೆಯ ತುಂಬಿ
ಜ್ಞಾನದ ಬೆಂಕಿ ಅಚ್ಚಿ
ಅಜ್ಞಾನದ ಅಂಧಕಾರವ ತೊಲಗಿಸೋಣ

ಎಲ್ಲರಿಗೂ ಶುಭ ತರಲಿ ಬೆಳಕಿನ ಹಬ್ಬ ದೀಪಾವಳಿ

ದೀಪಾವಳಿಯ ಶುಭಾಶಯಗಳು..

ನಿಮ್ಮ ಟಿಪ್ಪಣಿ ಬರೆಯಿರಿ

Filed under ಶುಭ ಕಾಮನೆಗಳು

ನಿಮ್ಮ ಟಿಪ್ಪಣಿ ಬರೆಯಿರಿ